ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮೊದಲು, ಭಯೋತ್ಪಾದನೆಯ ದಮನವೇ ನನ್ನ ಮೊದಲ ಆದ್ಯತೆ ಎಂದಿದ್ದವರು ಡೊನಾಲ್ಡ್ ಟ್ರಂಪ್! ಅಧಿಕಾರಕ್ಕೆ ಬರುವ ಮೊದಲು ಹಲವು ಮುಸ್ಲಿಂ ದೇಶಗಳ ನಿಷ್ಠುರ ಕಟ್ಟಿಕೊಂಡಿದ್ದ ಟ್ರಂಪ್, ಸಿಂಹಾಸನಾರೂಢರಾಗುತ್ತಿದ್ದಂತೆಯೇ ವರಸೆಯನ್ನೇ ಬದಲಿಸಿದ್ದರು! ಪಾಕಿಸ್ತಾನವನ್ನು ತನ್ನದೇ ಪುಟ್ಟ ಕೂಸು ಎಂಬಂತೆ ಹೊಗಳಿದ್ದೋ ಹೊಗಳಿದ್ದು, ಆರೈಕೆ ಮಾಡಿದ್ದೋ ಮಾಡಿದ್ದು! ಆದರೆ ಇದೀಗ ಅಚಾನಕ್ಕಾಗಿ ಯು ಟರ್ನ್ ಹೊಡೆದಿದ್ದಾರೆ! ಪಾಕಿಸ್ತಾನದ ಕುತಂತ್ರದ ಅರಿವಾದ ನಂತರ, ಅದು ಅಮೆರಿಕದಂಥ ಅಮೆರಿಕವನ್ನೇ ಮೂರ್ಖನನ್ನಾಗಿ ಮಾಡುತ್ತಿದೆ ಎಂಬುದು ತಿಳಿದ ನಂತರ ತಮ್ಮ ವರಸೆಯನ್ನು ಮತ್ತೊಮ್ಮೆ ಬದಲಿಸಿದ್ದಾರೆ! ಪಾಕಿಸ್ತಾನಕ್ಕೆ ಇನ್ನು ಮೇಲೆ ಯಾವುದೇ ನೆರವು ನೀಡುವುದಿಲ್ಲ ಎಂದು ಘಂಟಾಘೋಷವಾಗಿ ಟ್ವೀಟಿಸಿದ ಟ್ರಂಪ್ ನಡೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೂ ಮುನ್ನ, ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್, "ಪಾಕಿಸ್ತಾನ ಮತ್ತು ಅದರ ನಾಯಕರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಅಮೆರಿಕ ಸದಾ ಉತ್ಸುಕವಾಗಿದೆ." ಎಂದಿದ್ದರು.
Donald Trump yet again steals the show with his tweets . This time he totally contradicts his own tweet which he has tweeted 2 months back about Pakistan.